ಗ್ರಾಮ ಒನ್
ಕರ್ನಾಟಕ ಸರ್ಕಾರ

ಗ್ರಾಮ ಒನ್ ಬಗ್ಗೆ

ಗ್ರಾಮ-ಒನ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸೇವಸಿಂಧು ಯೋಜನೆಯಡಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ ಸುಮಾರು 750 ಕ್ಕೂ ಹೆಚ್ಚು ನಾಗರೀಕ ಸೇವೆಗಳನ್ನು ಪಡೆಯಲು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಅದೇ ರೀತಿ ಸಕಾಲ, ಮಾಹಿತಿ ಹಕ್ಕು ಅಧಿನಿಯಮ , ಬ್ಯಾಂಕಿಂಗ್ ಸೇವೆಗಳು ಹಾಗೂ ಸಾರ್ವಜನಿಕರ ಕುಂದು-ಕೊರತೆ ನಿವಾರಣೆ ಕೋರಿ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು. ಗ್ರಾಮ-ಒನ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಯವರು ಎಫ್‌ವೈ 20-21ರ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ವಾರದ ಎಲ್ಲಾ ಏಳು ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಕಾರ್ಯನಿರ್ವಹಿಸಲಿವೆ.

ಗ್ರಾಮ ಒನ್ ಕೇಂದ್ರಗಳ ಪ್ರಯೋಜನಗಳು ಹೀಗಿವೆ:

  • ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಜಿಲ್ಲೆ,ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
  • ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ .
  • ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರಿಕರು ಸಮಯ ಮತ್ತು ಹಣವನ್ನು ಉಳಿಸಬಹುದು.
  • ಮಧ್ಯವರ್ತಿಗಳಿಂದ ಯಾವುದೇ ಅಪಾಯವಿಲ್ಲ.

ನಮ್ಮ ಗ್ಯಾಲರಿ

ನಿರ್ವಹಣೆ ಮಾಹಿತಿ

ಶ್ರೀ ರಾಜೀವ್ ಚಾವ್ಲಾ, ಭಾ.ಆ.ಸೇ.

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಿಆಸುಇ (ಇ-ಆಡಳಿತ) ಹಾಗೂ ನಿರ್ದೇಶಕರು ಸಕಾಲ ಮಿಷನ್

ಶ್ರೀ.ವರಪ್ರಸಾದ್ ರೆಡ್ಡಿ ಬಿ.ಎನ್. ಕ.ಆ.ಸೇ.

ಯೋಜನಾ ನಿರ್ದೇಶಕರು

ನಮ್ಮನ್ನು ಸಂಪರ್ಕಿಸಿ

ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ

#13, ಸಿಆರ್ ಎನ್ ಛೇಂಬರ್,

ಧನಲಕ್ಷ್ಮಿ ಬ್ಯಾಂಕ್ ಮೇಲೆ,

2ನೇ ಮಹಡಿ, ಕಸ್ತೂರಬಾ ರಸ್ತೆ,

ಬೆಂಗಳೂರು - 560001